ಚಿರಾಯತ-
ಜೆನ್ಸಿಯನೇಸೀ ಕುಟುಂಬಕ್ಕೆ ಸೇರಿದ ಒಂದು ಮೂಲಿಕೆ ಸಸ್ಯ. ಸ್ಪರ್ಷಿಯ ಚಿರೆಟ ಇದರ ಶಾಸ್ತ್ರೀಯ ಹೆಸರು. ಇದು ಸಾಮಾನ್ಯವಾಗಿ 4,000'-10,000' ಎತ್ತರದ ಪ್ರದೇಶಗಳಲ್ಲಿ ಬೆಳೆಯುತ್ತದೆ.  ಇದಕ್ಕೆ ಆರ್ಥಿಕ ಪ್ರಾಮುಖ್ಯವಿರುವುದರಿಂದ ಇದನ್ನು ಬಹಳ ಬೆಳೆಸಲಾಗುತ್ತಿದೆ ಹೂಗಳು ನೀಲಿ ಅಥವಾ ಬಿಳಿ ಬಣ್ಣದವು.  ಅಂಡಾಶಯವನ್ನು ಬಿಟ್ಟು ಹೂವಿನ ವಿವಿಧ ಭಾಗಗಳ ಸಂಖ್ಕೆ ನಾಲ್ಕು ಇಲ್ಲವೆ ಐದು.  ಅಂಡಾಶಯ ಉಚ್ಚಸ್ಥಾನದ್ದು. ಅದರಲ್ಲಿ ಒಂದೇ ಕೋಶವಿದೆ.  ಹಣ್ಣಿನಲ್ಲಿ ಚಿಕ್ಕಗಾತ್ರದ ಅಸಂಖ್ಯ ಬೀಜಗಳಿರುತ್ತವೆ.

  
ಚಿರಾಯತಕ್ಕೆ ಔಷಧೀಯ ಮಹತ್ತ್ವವುಂಟು. ಕಾಂಡವನ್ನು ಬಿಟ್ಟು ಸಸ್ಯದ ಉಳಿದ ಎಲ್ಲ ಭಾಗಗಳು ಕಹಿಯಾಗಿರುತ್ತವೆ. ಇದಕ್ಕೆ ಕಾರಣ ಇದರಲ್ಲಿರುವ ಒಫೆಲಿಕ ಮತ್ತು ಚಿರಾಚಿನ್ ಎಂಬ ಆಮ್ಲಗಳು. ಜ್ವರ, ಶೀತ, ಹೊಟ್ಟೆನೋವು ಮುಂತಾದ ರೋಗಗಳಿಗೆ ಈ ಗಿಡ ಒಳ್ಳೆ ಔಷಧಿ ಎನಿಸಿದೆ.
(ಬಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ